Sri. Mysore Mallaradya & team
Smt. Sudha Narasimharaju & team
By Sri. Srikant Kalkur & team
ಶಿಶಿರ ಋತುವಿನ ಮಾಘ ಮಾಸದ ಕೃಷ್ಣ ಪಕ್ಷದ ಬಹುಳ ಚತುರ್ದಶಿ ಯಂದು ಬರುವ ಶಿವರಾತ್ರಿಯ ದಿನ / ರಾತ್ರಿ... ಮಹಾ ಶಿವರಾತ್ರಿ... ಪ್ರತಿ ತಿಂಗಳು ಶಿವರಾತ್ರಿ ಬಂದೆ ಬರುತ್ತದೇ ಆದರೇ ಇಂದಿನ ಶಿವರಾತ್ರಿ ಮಹಾ ಶಿವರಾತ್ರಿ ಎನ್ನುವರು....
*ಇನ್ನು, ನಮ್ಮ ಮಾನಸ ಶಿವನ ಬಗ್ಗೆ ನೋಡೋಣ...*
ಇದೇ ನೋಡಿ ನಮ್ಮ ಮಾನಸ ಶಿವ ಮತ್ತು ಗಣ (ಗಣಪತಿ, ಪಾರ್ವತಿ ಮತ್ತು ನಂದಿ ಸಮೇತ)... ಹಾ... ನಮ್ಮ ಮಾನಸ ಶಿವನ ವಾಸ ಸ್ಥಾನ ಇರುವುದು ಕನಕಪುರದ ಸಮೀಪ (14 ಕಿ. ಮಿ. ದೂರದಲ್ಲಿ), (ವಿಧಾನಸೌಧ ದಿಂದ 63 ಕಿ. ಮಿ). ಇರುವ ಉದರ ಹಳ್ಳಿಯಲ್ಲಿ... ನಮ್ಮ ಈ ಮಾನಸ ಶಿವ ಲಿಂಗವು 9 ಅಡಿ ಉಳ್ಳದ್ದಾಗಿದ್ದು. ಈ ಮಾನಸ ಶಿವ ಲಿಂಗವು ಜೈಪುರ್ ನ ಅಚ್ಚ ಮಾರ್ಬಲ್ ನಿಂದ ಮಾಡಿರುವುದು.... ಮತ್ತು ಇದರ ವಿಶೇಷತೆ ಬಗ್ಗೆ ಕೇಳಿದರೇ.... ಈ ಮಾನಸ ಶಿವಲಿಂಗವು ಮೂರು ಬಾಗವಾಗಿ ವಿಂಗಡಿಸಬಹುದು... ಶಿವಲಿಂಗದ ಕೆಳ ಭಾಗವು ಬ್ರಹ್ಮ ಲಿಂಗವೆಂದು, ನಡುವಿನದು ವಿಷ್ಣುಲಿಂಗವೆಂದು ಮತ್ತು ಮೇಲಿನ ಭಾಗ ಸ್ವಯಂ ಮಾನಸ ಶಿವನೇ... ಇದರ ಪ್ರೇರಣೆ ಪ್ರಾಯಶಃ ಈ ಕೆಳಗಿನ ಕಥೆಯೇ ಇರಬೋಹುದೊ....
ಶಿವಪುರಾಣದಲ್ಲಿ ಹೇಳಿರುವಂತೆ.... ದೇವಲೋಕದಲ್ಲಿ ಒಮ್ಮೆ ಬ್ರಹ್ಮ ಹಾಗೂ ವಿಷ್ಣುವಿನ ನಡುವೆ ಯಾರು ಶ್ರೇಷ್ಠರು ಎಂಬ ವಿಷಯಕ್ಕೆ ವಾಗ್ವಾದಗಳು ನಡೆಯುತ್ತಿದ್ದವು. ಮಹಾ ದೇವತೆಗಳಿಬ್ಬರನ್ನೂ ಸಮಾಧಾನ ಮಾಡುವುದು ದುರ್ಲಭ ಎನಿಸಿದಾಗ, ದೇವತೆಗಳೆಲ್ಲ ಹೋಗಿ ಪರಶಿವನನ್ನು ಬೇಡಿಕೊಳ್ಳುತ್ತಾರೆ. ವಿಷ್ಣು ಹಾಗೂ ಬ್ರಹ್ಮರ ಜಗಳವನ್ನು ಶಮನ ಮಾಡುವಂತೆ ಕೋರಿಕೊಳ್ಳುತ್ತಾರೆ. ಆಗ ವಿಷ್ಣು ಮತ್ತು ಬ್ರಹ್ಮರ ನಡುವೆ ಶಿವ, ಅಗ್ನಿಕಂಭದ ರೂಪದಲ್ಲಿ ಬಂದು ನಿಂತು ತನ್ನ ಮೂಲವನ್ನು ಕಂಡುಹಿಡಿಯಲು ಸೂಚಿಸುತ್ತಾನೆ. ಆಗ ಹಂಸದ ರೂಪ ತಾಳಿದ ಬ್ರಹ್ಮ ಅಗ್ನಿ ಕಂಭದ ಶಿರವನ್ನು ಹುಡುಕಲು ಮೇಲ್ಮುಖವಾಗಿ ಹೊರಡುತ್ತಾನೆ. ವಿಷ್ಣು ವರಾಹವತಾರ ತಾಳಿ ಕಂಭದ ತಳವನ್ನು ನೋಡುವುದಕ್ಕಾಗಿ ಪಾತಾಳಕ್ಕೆ ಇಳಿಯುತ್ತಾನೆ. ಎಷ್ಟೇ ಮುಂದೆ ಸಾಗಿದರೂ ಬ್ರಹ್ಮ ಹಾಗೂ ವಿಷ್ಣು ಇವರಿಬ್ಬರಿಗೂ ಕಂಭದ ಅಂತ್ಯವೇ ಕಾಣುವುದಿಲ್ಲ. ಅನಂತವಾಗಿರುವ ಶಿವನ ಶಕ್ತಿಯನ್ನು ನೋಡಿದ ವಿಷ್ಣು ಹಾಗೂ ಬ್ರಹ್ಮರಿಗೆ ಸತ್ಯದ ಅರಿವಾಗುತ್ತದೆ. ಆದರೆ ಶಿವನ ಜಡೆಯಿಂದ ಕೆಳಗೆ ಬೀಳುತ್ತಿದ್ದ ಕೇತಕಿ ಪುಷ್ಫದ ಬಳಿ ಬ್ರಹ್ಮ , ನೀನು ಎಲ್ಲಿಂದ ಬೀಳುತ್ತಿದ್ದೀಯ ಎಂದು ಪ್ರಶ್ನಿಸುತ್ತಾನೆ. ಆಗ ಆ ಪುಷ್ಪವು ನಾನು ಅಗ್ನಿ ಕಂಭದ ಶಿರದಿಂದ ಬೀಳುತ್ತಿದ್ದೇನೆ ಎಂಬ ಉತ್ತರ ನೀಡುತ್ತದೆ. ಆಗ ಬ್ರಹ್ಮ ಶಿವನಲ್ಲಿಗೆ ಬಂದು ಕೇತಕಿ ಪುಪ್ಪವನ್ನು ತೋರಿಸಿ, ತಾನು ಅಗ್ನಿ ಕಂಭದ ಶಿರಭಾಗವನ್ನು ನೋಡಿರುವುದಾಗಿಯೂ ಅಲ್ಲಿಂದಲೇ ಕೇತಕಿ ಪುಷ್ಪವನ್ನು ತಂದಿರುವುದಾಗಿಯೂ ಹೇಳುತ್ತಾನೆ. ಇವರಿಬ್ಬರ ಮೋಸವನ್ನು ಅರಿತ ಶಿವ, ಬ್ರಹ್ಮನನ್ನು ಯಾರೂ ಪೂಜಿಸಕೂಡದು ಎಂದು ಶಾಪ ನೀಡಿ ಲಿಂಗರೂಪ ತಾಳುತ್ತಾನೆ. ಅಂದು ಮಾಘ ಮಾಸದ ಬಹುಳ ಚತುರ್ದಶಿಯಾಗಿರುತ್ತದೆ. ಹೀಗಾಗಿ, ಶಿವ ಲಿಂಗರೂಪ ತಾಳಿದ ಮಾಘ ಮಾಸದ ಬಹುಳ ಚತುರ್ದಶಿಯಂದು ಶಿವರಾತ್ರಿಯನ್ನು ಆಚರಿಸಲಾಗುತ್ತದೆ.
ಆದರೂ ರಾಜಸ್ತಾನದ, ಪುಷ್ಕರ್ ಎಂಬ ಪ್ರದೇಶದಲ್ಲಿ ಚತುರ್ಮುಖ ಬ್ರಹ್ಮ ನ ದೇವಸ್ಥಾನವಿದ್ದು, (ಇದು, ಅಖಂಡ ಭೂಲೋಕದಲ್ಲಿರುವ ಏಕೈಕ ಬ್ರಹ್ಮನ ದೇವಸ್ಥಾನ) ಇಲ್ಲಿ ಎಲ್ಲ ರೀತಿಯಲ್ಲೂ ಪೂಜೆ ಪುನಸ್ಕಾರ ನಡೆಯುತ್ತದೆ ವಿಜೃಂಭಣೆಯಿಂದ....
ಜೈಪುರ್ ಸಮೀಪದ, ಆಜ್ಮೈರ್ ಎಂಬ ಒಂದು ಪ್ರದೇಶದಲ್ಲಿ ಒಂದು ಚಿಕ್ಕ ಬೆಟ್ಟದ ಮೇಲೆ ಅತ್ಯಂತ ಪುರಾತನವಾದ ಚತುರ್ಮುಖ ಶಿವನ ದೇವಸ್ಥಾನವಿದ್ದು, ಶಿವನ (ಚತುರ್ ಮುಖ) ಚಿಕ್ಕ ಮೂರ್ತಿ (ಚಿತ್ರ -5 ನೋಡುವುದು).. ನಂತರ ಸ್ವಲ್ಪ ಕೆಳಗೆ ಇಳಿದು ಬಂದಾಗ ಕಾಣುವುದು ಒಂದು ವಿಷ್ಣುವಿನ ಸ್ಥಾನ ಮತ್ತು ಪಾತಾಳ ಗಂಗೆ (ಎಷ್ಟು ಅಡಿ ಆಳ ಎಂದು ಇಲ್ಲಿಯವರೆಗೂ ಯಾರೂ ಕಂಡು ಹಿಡಿಯಲು ಆಗಿಲ್ಲವಂತೆ... ( ಚಿತ್ರ - 6 ನೋಡುವುದು) ಅಲ್ಲಿಯ ಪಂಡಿತ್ (ಪೂಜಾರಿ ಹೇಳುವುದು ಪಾತಾಳದಲ್ಲಿ ಇರುವುದು ಬ್ರಹ್ಮನ ಆವಸ್ತಾನ ಎಂದು)... ತಾಳೆ ಹಾಕಿ ನೋಡಿ... ನಮ್ಮ ಮಾನಸ ಶಿವನ ಲಿಂಗ ರೂಪ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನ ಸಮೇತ ಏಕ ಲಿಂಗದಲ್ಲಿ ನಿಮ್ಮ ಕಣ್ಣ ಮುಂದೆ ಬರುವುದು....
ಕನಕ ಪುರದ ಸಮೀಪ ಉದರಹಳ್ಳಿಯಲ್ಲಿ ಪ್ರತಿಷ್ಠಾಪಿತ ಮಾನಸ ಶಿವಲಿಂಗವು ಭೂಮಿಯ ಸಮತಟ್ಟದಲ್ಲಿ ಬ್ರಹ್ಮ ವಾಸಿ ಲಿಂಗ ಬಾಗವು ಇದ್ದು... ಭೂಮಿಯ ಮೇಲ್ಮೈಇಂದ ಸುಮಾರು ಎಂಟು ಅಡಿ ಎತ್ತರದಲ್ಲಿ ನಡುವಿನ ಬಾಗದಲ್ಲಿ ವಿಷ್ಣು ವಾಸಿ ಲಿಂಗ ಬಾಗವು ಇದ್ದು ,.. ನಂತರ ಕಾಣುವುದೇ ಲಿಂಗ ರೂಪಿ ಮಾನಸ ಶಿವ (ಚಿತ್ರ 1,2,3,4 ನೋಡುವುದು..)
ದಾಸನ್
A night of food, fun and prayers
Copyright © 2024 Maanas Shiva - All Rights Reserved.
We use cookies to analyze website traffic and optimize your website experience. By accepting our use of cookies, your data will be aggregated with all other user data.